Details apply for 2nd puc exam 2,2024: ದ್ವಿತೀಯ ಪಿಯುಸಿ 2ನೇಯ ಪರೀಕ್ಷೆಯ ಅರ್ಜಿ ಸಲ್ಲಿಸುವ ಬಗ್ಗೆ

Details apply for 2nd puc exam 2,2024:

2024ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-2 ಕ್ಕೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು Details apply for 2nd puc exam 2,2024: ಈ ಕೆಳಕಂಡಂತೆ ದಿನಾಂಕ ನಿಗದಿಪಡಿಸಲಾಗಿದೆ. ಎಲ್ಲಾ ಕಾಲೇಜಿನ ಪ್ರಾಂಶುಪಾಲರುಗಳು ಈ ಸುತ್ತೋಲೆಯನ್ನು ಕಡ್ಡಾಯವಾಗಿ ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸುವುದು ಮತ್ತು ಪ್ರಾಂಶುಪಾಲರುಗಳು ಈ ಕೆಳಗಿನಂತೆ ಸೂಚನೆಗಳನ್ನು ಪಾಲಿಸುವುದು

Details apply for 2nd puc exam 2,2024: ದ್ವಿತೀಯ ಪಿಯುಸಿ 2ನೇಯ ಪರೀಕ್ಷೆಯ ಅರ್ಜಿ ಸಲ್ಲಿಸುವ ಬಗ್ಗೆ

**ವಿಷಯ: 2024 ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿ.ಯು.ಸಿ ಪರೀಕ್ಷೆ-2 ಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಬಗ್ಗೆ..

  1. 2024 ರ ಪರೀಕ್ಷೆ-1 ರಲ್ಲಿ ಉತ್ತೀರ್ಣರಾಗಿದ್ದು ಫಲಿತಾಂಶ ಉತ್ತಮಪಡಿಸಿಕೊಳ್ಳಲು 2024ರ ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ಬರೆಯಲು ಇಚ್ಚಿಸಿದಲ್ಲಿ, ಅಂತಹ ವಿದ್ಯಾರ್ಥಿಗಳು ಫಲಿತಾಂಶ ಪಟ್ಟಿಯ ಆಧಾರದ ಮೇಲೆ ನಿಯಮಾನುಸಾರ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಅರ್ಜಿಯನ್ನು ಕಾಲೇಜಿನಲ್ಲಿ ಪ್ರಾಂಶುಪಾಲರಿಗೆ ಸಲ್ಲಿಸುವುದು. ಸದರಿ ಪ್ರಕ್ರಿಯೆಗೆ ಮಂಡಲಿಯ ಅನುಮತಿ ಪಡೆಯುವ ಅವಶ್ಯಕತೆ ಇರುವುದಿಲ್ಲ. ವಿದ್ಯಾರ್ಥಿಗಳು ಫಲಿತಾಂಶ ಉತ್ತಮಪಡಿಸಿಕೊಳ್ಳಲು ONLINE Details apply for 2nd puc exam 2,2024: ಮುಖಾಂತರವೂ ಅರ್ಜಿ ಸಲ್ಲಿಸಬಹುದಾಗಿದೆ.
  2. ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಅನುತ್ತೀರ್ಣ ಅಂಕಪಟ್ಟಿ ಅರ್ಜಿ (MCA) ಗಳನ್ನು ಮಂಡಲಿಯಿಂದ ನೀಡಲಾಗುವುದಿಲ್ಲ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಡಲಿಯಿಂದ ನೀಡಲಾಗುವ ಫಲಿತಾಂಶ ಪಟ್ಟಿಯ (RESULT SHEET) ಆಧಾರದ ಮೇಲೆ ಪರೀಕ್ಷೆ-2 ಕ್ಕೆ ನೋಂದಾಯಿಸಿಕೊಂಡು ಪರೀಕ್ಷಾ ಶುಲ್ಕ ಸ್ವೀಕರಿಸಿ ಮಂಡಲಿಯ PU EXAM ಲಾಗಿನ್‌ನಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಭರ್ತಿ ಮಾಡುವುದು.
  3. ಪರೀಕ್ಷೆ-1 ಕ್ಕೆ ನೊಂದಾಯಿಸಿಕೊಂಡು ಪರೀಕ್ಷೆ ಬರೆಯದೇ ಇರುವ ವಿದ್ಯಾರ್ಥಿಗಳು ಪರೀಕ್ಷೆ-2 ಕ್ಕೆ ಹಾಜರಾಗಬಹುದಾಗಿದೆ.
  4. ವಿದ್ಯಾರ್ಥಿಗಳು Online Registration ನೋಂದಾಯಿಸಿಕೊಳ್ಳಬಹುದಾಗಿದೆ. ಮೂಲಕವೂ ಪರೀಕ್ಷೆ-2ಕ್ಕೆ
  5. ಮಾರ್ಚ್ 2024 ರ ಪರೀಕ್ಷೆ-1 ಕ್ಕೆ ನೋಂದಾಯಿಸಿದ್ದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ-2 ಕ್ಕೆ Online ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ. ನೋಂದಾಯಿಸಿಕೊಳ್ಳಲು https://kseab.karnataka.gov.in → ದ್ವಿತೀಯ ಪಿಯು ಪರೀಕ್ಷೆ-2ರ ಪರೀಕ್ಷೆಗೆ ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ. ನೋಂದಾಯಿಸುವ ಪ್ರಕ್ರಿಯೆಯು ವಿವರಣೆಗಳಿಗಾಗಿ (flow chart) ಅನ್ನು ಓದಿಕೊಂಡು ಅದರಂತೆ ನೋಂದಾಯಿಸುವುದು.
  6. 2024 ನೇ ಸಾಲಿಗಿಂತ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಮೂಲ
  7. ಅನುತ್ತೀರ್ಣ ಅಂಕಪಟ್ಟಿ/ಅರ್ಜಿ ಅಥವಾ ಹಿಂದಿನ ಎಂ.ಸಿ.ಎಗಳ ಆಧಾರದ ಮೇಲೆ ಪರೀಕ್ಷಾ
  8. ಶುಲ್ಕಗಳನ್ನು ಸ್ವೀಕರಿಸಿ ಪ್ರಾಂಶುಪಾಲರು ಮಂಡಲಿಯ PU EXAM ಲಾಗಿನ್‌ನಲ್ಲಿ ವಿದ್ಯಾರ್ಥಿಗಳ
  9. ಮಾಹಿತಿಯನ್ನು ಭರ್ತಿ ಮಾಡುವುದು.
  10. 2006 ರಿಂದ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಮೂಲ ಅನುತ್ತೀರ್ಣ ಅಂಕಪಟ್ಟಿ/ಅರ್ಜಿ ಅಥವಾ ಹಿಂದಿನ ಎಂ.ಸಿ.ಎಗಳ ಆಧಾರದ ಮೇಲೆ ಪರೀಕ್ಷಾ ಶುಲ್ಕಗಳನ್ನು ಸ್ವೀಕರಿಸಿ ಸಂಬಂಧಿಸಿದ ದಾಖಲೆಗಳನ್ನು ಪ್ರಾಂಶುಪಾಲರು ದೃಢೀಕರಿಸಿ, ಮಂಡಲಿಗೆ ಸಲ್ಲಿಸುವುದು

** 2024 ರಲ್ಲಿ ನಡೆಸಲಾಗುವ ದ್ವಿತೀಯ ಪಿಯುಸಿ ಪರೀಕ್ಷೆ-2 ಕ್ಕೆ ಪುನರಾವರ್ತಿತ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕಗಳ ವಿವರ:

ಪರೀಕ್ಷಾ ಶುಲ್ಕ(ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳನ್ನು ಹೊರತುಪಡಿಸಿ)

*ಒಂದು ವಿಷಯಕ್ಕೆ 140/-

*ಎರಡು ವಿಷಯಕ್ಕೆ 270/-

*ಮೂರು ಅಥವಾ ಹೆಚ್ಚಿನ ವಿಷಯಗಳು 400/-

> ONLINE ನಲ್ಲಿ ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳಿಗೆ PORTAL ಶುಲ್ಕ. 01/-

ಫಲಿತಾಂಶ ಉತ್ತಮಪಡಿಸಿಕೊಳ್ಳಲು (IMPROVEMENT) ಶುಲ್ಕ

*ಪ್ರಥಮ ಬಾರಿಗೆ ಒಂದು ವಿಷ16/04/2024ಯಕ್ಕೆ 175/-

2024 ರಲ್ಲಿ ನಡೆಸಲಾಗುವ ದ್ವಿತೀಯ ಪಿಯುಸಿ ಪರೀಕ್ಷೆ-2 ಕ್ಕೆ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ನಿಗದಿಪಡಿಸಿರುವ ದಿನಾಂಕಗಳು

ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸಲು ಹಾಗೂ
ಪುನರಾವರ್ತಿತ ಮತ್ತು ಫಲಿತಾಂಶ
ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳ
ಮಾಹಿತಿಯನ್ನು ಪ್ರಾಂಶುಪಾಲರು ಮಂಡಲಿಯ
PU EXAMಲಾಗಿನ್‌ ನಲ್ಲಿ ಇಂದೀಕರಿಸಲು
ಕೊನೆಯ ದಿನಾಂಕ
ಪ್ರಾಂಶುಪಾಲರು ಪರೀಕ್ಷಾ
ಶುಲ್ಕವನ್ನು ಒಂದೇ ಕಂತಿನಲ್ಲಿ ಖಜಾನೆಗೆ
ಸಂದಾಯ ಮಾಡಬೇಕಾದ ದಿನಾಂಕ
ಪ್ರಾಂಶುಪಾಲರು ಪರೀಕ್ಷಾ ಅರ್ಜಿಗಳನ್ನು
ಮೂಲ ಚಲನ್ ಸಹಿತ ಜಿಲ್ಲಾ ಉಪನಿರ್ದೇಶಕರ
ಕಛೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕಾದ ದಿನಾಂಕ
ಫಲಿತಾಂಶ ಪ್ರಕಟಿಸಿದ ದಿನಾಂಕದಿಂದ
16/04/2024ರವರೆಗೆ
17/04/202417/04/2024
17/04/2024 ರಿಂದ
18/04/20240ವರೆಗೆ
19/04/202419/04/2024

*ಶಾಲಾ ಶಿಕ್ಷಣ ಇಲಾಖೆ, (ಪದವಿ ಪೂರ್ವ) ರವರು ಪ್ರಾಂಶುಪಾಲರಿಂದ ಸ್ವೀಕರಿಸಿದ ಪರೀಕ್ಷಾ ಅರ್ಜಿಗಳನ್ನು ಮಂಡಲಿಯ PU EXAM Details apply for 2nd puc exam 2,2024:ಲಾಗಿನ್‌ನಲ್ಲಿ ಇಂಧೀಕರಿಸಿರುವುದನ್ನು ಕಡ್ಡಾಯವಾಗಿ ಖಾತ್ರಿಪಡಿಸಿಕೊಂಡು ಚೆಕ್‌ಲಿಸ್ಟನ್ನು ಪ್ರಾಂಶುಪಾಲರುಗಳಿಂದ ಅಪ್‌ಡೇಟ್ ಮಾಡಿರುವುದಕ್ಕೆ ಮುಚ್ಚಳಿಕೆ ಪತ್ರ ಪಡೆದ ನಂತರ ಕಾಲೇಜುವಾರು ಕ್ರೋಢೀಕೃತ ವಿದ್ಯಾರ್ಥಿಗಳ ಪಟ್ಟಿ, ಹಣ ಪಾವತಿಸಿರುವ ಮೂಲ ಚಲನ್ ಹಾಗೂ ಮುಚ್ಚಳಿಕೆ ಪತ್ರವನ್ನು ‘ಖುದ್ದಾಗಿ’ ಕೆಳಗೆ ತಿಳಿಸಿದ ವೇಳಾಪಟ್ಟಿಯಂತೆ ಮಂಡಲಿಗೆ ಸಲ್ಲಿಸಬೇಕು. ಜಿಲ್ಲಾ ಉಪನಿರ್ದೇಶಕರುಗಳು, ಹಿಂದಿನ ವರ್ಷಗಳಲ್ಲಿ ಸದರಿ ದಾಖಲೆಗಳನ್ನು ಕೇಂದ್ರ ಕಛೇರಿಗೆ ವಿಳಂಬವಾಗಿ ನೀಡಿರುವ ಹಿನ್ನೆಲೆಯಲ್ಲಿ ಈ ವರ್ಷದಲ್ಲಿ ‘ಮುದ್ದಾಂ’ ಆಗಿ ನಿಗದಿತ ದಿನಾಂಕದೊಳಗೆ ದಾಖಲೆಗಳನ್ನು ನೀಡದಿರುವ ಉಪನಿರ್ದೇಶಕರುಗಳು ಮತ್ತು ಪ್ರಾಂಶುಪಾಲರುಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಆದ್ದರಿಂದ ಯಾವುದೇ ವಿಳಂಬಕ್ಕೆ ಆಸ್ಪದ ನೀಡದಿರಲು ಸೂಚಿಸಿದೆ.

ಅರ್ಜಿಗಳ ವಿವರಗಳು :

17/04/2024 ರಂದು ಸ್ವೀಕರಿಸಿದ ದಂಡರಹಿತ ಪುನರಾವರ್ತಿತ ಹಾಗೂ ಫಲಿತಾಂಶ ಉನ್ನತೀಕರಣಕ್ಕಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಅರ್ಜಿಗಳು

ದಿನಾಂಕ:19/04/2024ರಂದು ಸ್ವೀಕರಿಸಿದ ದಂಡಸಹಿತ ಪುನರಾವರ್ತಿತ ಹಾಗೂ ಫಲಿತಾಂಶ ಉನ್ನತೀಕರಣಕ್ಕಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಅರ್ಜಿಗಳು

ಮಂಡಲಿಗೆ ಸಲ್ಲಿಸಬೇಕಾದ ದಿನಾಂಕ

18/04/2024

20/04/2024

Pdf download link below & do follow 👇

WhatsApp Group Join Now
Telegram Group Join Now
Instagram Group Join Now
One thought on “Details apply for 2nd puc exam 2,2024: ದ್ವಿತೀಯ ಪಿಯುಸಿ 2ನೇಯ ಪರೀಕ್ಷೆಯ ಅರ್ಜಿ ಸಲ್ಲಿಸುವ ಬಗ್ಗೆ”

Leave a Reply

Your email address will not be published. Required fields are marked *